ಇದು ಬಹಳ ಆಶ್ಚರ್ಯ ವಾದ ಸಂಗತಿ. ಇಂದು ನದೆದ ಘಟನೆ. ಇದು ನನಗೆ ತಿಳಿಸಿದ್ದೆನೆಂದರೆ, "ನನ್ನ ಮಾತನ್ನು ನಾನು ಮೊದಲು ಪಾಲಿಸಬೇಕು. ಅನಂತರ, ಮತೊಬ್ಬರಿಗೆ ಉಪದೇಶ ಮಾಡಬಹುದು". ಆ ಘಟನೆ...............
ನಾನು ದಿನವೂ ನನ್ನ ಮಗಳಿಗೆ ಹುಭದಿನ ಹಾರೈಸುವಾಗ, ಆ ದಿನದ ಮೊದಲ ಅಕ್ಷರದಿಂದ ಪ್ರಾರಂಭವಾಗುವ ಇತರೆ ಪದಗಳಿಂದ ಕೂಡಿದ ದಿನದ ಶುಭವಾರ್ತೆಯನ್ನು ಎಸ್.ಎಮ್.ಎಸ್. ಕಳುಹಿಸುತ್ತೇನೆ. ಇಂದು, ಗುರುವಾರವೂ ಕಳುಹಿಸಿದೆ. ನನ್ನ ಶುಭ ವಾರ್ತೆ ಇಂಗ್ಳೀಷಿ ನಲ್ಲಿತ್ತು. ನಾನು ಕಳುಹಿಸಿದ ಮೆಸೆಜ್ ಎನೆಂದ್ರೆ,
"Good Moning. Thursday tells you to be an ocean of patience to reach tough goals before you. Good day"
ಈ ಮಾತನ್ನು ನಾನು ನನ್ನ ಮೊಬೈಲ್ನಿಂದ ಕಳುಹಿಸಿದೆ, ನನ್ನ ಮಗಳ ಮೊಬೈಲ್ ನಂಬರ್ ಗೆ. ಮೊದಲಸಲ "ಮೆಸ್ಸೇಜ್ ನಾಟ್ ಸೆಂಟ್, ಎಂದು ಬಂತು. ಮತ್ತೊಮ್ಮೆ ಇದೇ ಮೆಸ್ಸೇಜನ್ನು ಅದೇ ನಂಬರಿಗೆ ಕಳುಹಿಸಿದೆ. ಆದರೆ, ಮತ್ತೆ "ಮೆಸ್ಸೇಜ್ ನಾಟ್ ಸೆಂಟ್, ಎಂದು ಬಂತು. ಇದು ಎಕಪ್ಪಾ, ನನ್ನ ತಾಳ್ಮೆಯನ್ನು ಪರೀಕ್ಷಿಸುತ್ತಿದೆಯಲ್ಲಾ, ಎಂದು ಸಹನೆಯನ್ನು ಕಳೆದುಕೊಳ್ಳುವ ಕ್ಷಣದಲ್ಲಿ, ನನ್ನ ಇಂದಿನ ಮೆಸ್ಸೇಜ್ ಜ್ಞಾಪಕಕ್ಕೆ ಬಂತು. ತಾಳ್ಮೆಯೊಡನೆ ಮತ್ತೆ ಕಳುಹಿಸಿದೆ. ಮೆಸ್ಸೇಜ್ ಅವಳಿಗೆ ತಲಪಿತು.
Hi na,
ReplyDeleteLovely thoughts... You are becoming a good writer...
Keep writing... For the simple joy of it...
Love
Siri
Hi, Good going.keep it up.
ReplyDeletesarasa.