my g.s. abhyu

my g.s. abhyu
hey where are looking?

Friday, October 30, 2009

Jeevana

ಬೆಂಗಳೂರು ನಗರಿಯಲ್ಲಿಹುಟ್ಟಿತ್ತೊಂದು ಪುಟ್ಟ ಮಗುವು
ಬಾಲ್ಯದಲ್ಲಿ ಬೆಳೆಯುತಿರಲು, ಕಳೆದುಹೋದಳದರ ಅಮ್ಮ
ಹಲವು ವರುಷ ಬೆಳಯಿತ್ತಲ್ಲಿ,
ಅವರ, ಇವರ ಪ್ರೀತಿಯಲ್ಲಿ.

ಪ್ರೀತಿ ಮಮತೆ ತೋರಿ, ಇದಕ್ಕೆ,
ಬೆಳಸಲೆಂದು, ಸುಖವ ಬಿಟ್ಟು,
ದೂರದೂರಿನಿಂದ ಬಂದು
ತಾಯಿಯಾಗಿ ನಿಂತಳು.

ಇವಳ ಪ್ರೀತಿಯಲ್ಲಿ ಬೆಳೆದು
ಪುಟ್ಟ ಮಗುವು ಯುವಕನಾಗಿ
ತ್ಯಾಗಮಾಡಿದಣ್ಣನಿಂದ
ಇಂಜಿನೀರಿಂಗ್ ಓದ, ಓದಿ
ಪದವೀಧರನಾದನು.

ರಾತ್ರಿ ಕಳೆದು, ಹಗಲು ಬಂತು
ದು:ಖ ಕರಗಿ, ನಗುವು ಬಂತು.
ಕಷ್ಟ ಸರಿದು, ಸುಖವ ಕಾಣ್ಬ
ಕಾಯಕವು ಅರಸಿ ಬಂತು.

ಈ ಯುವಕನಿಗೆ,
ಸತಿಯು ಬೇಕು, ಸುತನು ಬೇಕು
ಎಂಬ ಆಸೆ ಬೆಳೆಯಿತು.

ದೇವರಲ್ಲಿ ಬೇಡಿಕೊಂಡ
ಒಳ್ಳೆಸತಿಯ ನೀಡಲೆಂದು
ಪ್ರೀತನಾದ ದೇವ ನವಗೆ
ಕೊಟ್ಟ ಚಂದದ
ಚಲುವೆ.

ಅವನು ಇವಳು ಕೂಡಿ ಆಡಿ
ಸಂಸಾರದ ನೊಗವಹೊತ್ತು
ಭಾರದಲ್ಲಿ ಕುಸಿಯುತಿರೆ,
ಸಂತೋಷದ ಮಿಂಚೊಂದು
ಮಗುರೂಪದಿ ಬಂದು
ಅವರ ಮಡಿಲ ತುಂಬಿತು.

1 comment:

  1. Powerful, na!
    "Chendada cheluve" - wow what a salutation to amma. I'll bet she is in seventh heaven, now!

    You have a talent that was hidden all these days.
    Now it is out in the open.

    Keep penning your thoughts in this blog.
    I will always be your reader!

    ReplyDelete