ವಾರ ವಾರ ಕಳೆದರೂ
ಶುಕ್ರವಾರ ಬರುವುದು
ವಾರದಕೊನೆ ಎಂದು,
ರಜೆ ಅವಧಿಯ ಶುರುವೆಂದು
ಸಂತಸ ತರುವುದು.
ವಾರದ ಘಟ್ಟವು ಮುಗುಯುತಿದೆ ಎಂದು
ಮುಂದಿನದ ಆಗಮನ, ಬಂದಾಗ ಬರಲೆಂದು
ನಿದ್ರೆಯಾಮಡಿಲ್ಲಲ್ಲಿ ಸುಖನಿದ್ರೆ ಆಶಯದಿ
ಟೆಕ್ಕಿಗಳೆಲ್ಲ್ರರೂ ಕಾತರದಿ ಕಾಯುತಲಿರುವ,
ಬರುವುದು ಬರುವುದು, ಶುಕ್ರವಾರ ಬರುವುದು.
ಪರವೂರು ವಾಸಿಗಳ ತೌರೂರ ಸೆಳತದ
ಅಗ್ನಿಗೆ, ಗಾಳೀ ಬೀಸುವಹಾಗೆ,
ಬರುವುದು,ಬರುವುದು,
ಶುಕ್ರವಾರ ಬರುವುದು
ಸಂತಸ ತರುವುದು.
ಶುಕ್ರವಾರ ದ ಹಾದು ಸಹಜವಾಗಿ ಹೊರಹೊಮ್ಮಿದೆ
ReplyDeleteಹೀಗೆ ಸುನ್ದರವಾದ ಕವನಗಲು ನಿಮ್ಮಿನ್ದ ಬರುಥಿರಲಿ.
ಸರಸ.